ಪುಸ್ತಕ ಪ್ರೀತಿಯ 'ಪೇಪರ್‌ರಾಕೆಟ್'
ವಿನೀತ್ ಬಿ ‘ತಲೆ ತಗ್ಗಿಸಿ ನನ್ನನ್ನುಓದು ನಿನ್ನನ್ನು ಸಮಾಜದಲ್ಲಿ ತಲೆಎತ್ತಿ ನಿಲ್ಲುವಂತೆ ಮಾಡುತ್ತೇನೆ’ ಎನ್ನುವ ಪುಸ್ತಕಗಳನ್ನು ಪ್ರೀತಿಸಿ, ಓದುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ, ಅಂತಹ ಪುಸ್ತಕ ಓದುವ ಹುಮ್ಮಸ್ಸು ಎಲ್ಲರಲ್ಲೂ ಮೂಡಬೇಕೆಂಬ ಆಶಯದಿಂದ ಮಂಗಳೂ- ರಿನಲ್ಲಿ ರೂಪಶ್ರೀ ಶೆಣೈ ಅವರು ‘ಪೇಪರ್‌ರಾಕೆಟ್’ ಎಂಬ ಹೆಸರಿನ ಸುಮಾರು ೭೦೦ ಪುಸ್ತಕಗಳ ಮಿನಿ ಗ್ರಂಥಾಲಯವೊAದನ್ನು ಸ್ಥಾಪಿಸಿ ಪುಸ್ತಕ ಪ್ರೀತಿ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹೌದು, ಮಂಗಳೂರಿನ ಮಣ್ಣಗುಡ್ಡದ ವರ್ಟಿಕ್ಸ್ ಲಾಂಜ್‌ನಲ್ಲಿ ಈ ರೀತಿಯ ಅನುಪಮ ಕಾರ್ಯ ಆರಂಭವಾಗಿದೆ. ವರ್ಷಗಳ ಹಿಂದೆ ಕೇವಲ ಒಂದುಮೇಜು ಪುಸ್ತಕದೊಂದಿಗೆ ಆರಂಭಗೊAಡಿದ್ದ ಈ ಕಾರ್ಯವು, ೯೦ ವರ್ಷಗಳಷ್ಟು ಹಳೆಯ ಮತ್ತು ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ್ದ ಸ್ಥಳಕ್ಕೆ ಬಂದಿದೆ. ಅಲ್ಲಿಯೇ ಗ್ರಂಥಾಲಯ ರೂಪ ಗೊಂಡಿದೆ. ಪೇಪರ್‌ರಾಕೆಟ್ ಹೆಸರಿನಡಿ ಈ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು, ಕಿರಿಯರಿಂದ ಹಿರಿಯರವರೆಗೆ ಪುಸ್ತಕ ಓದುಗ ಮಿತ್ರರು ಗ್ರಂx- Áಲಯಕ್ಕೆ ಭೇಟಿ ನೀಡುತ್ತಾರೆ. ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಉಚಿತವಾಗಿ ಓದಲು ಅವಕಾಶ ವಿದ್ದು. ಅನಿವಾರ್ಯ ಸಂದರ್ಭಗಳಲ್ಲಿ ಮನೆ...