Posts

Showing posts with the label Writings

ಪುಸ್ತಕ ಪ್ರೀತಿಯ 'ಪೇಪರ್‌ರಾಕೆಟ್'

ವಿನೀತ್ ಬಿ   ‘ತಲೆ ತಗ್ಗಿಸಿ ನನ್ನನ್ನುಓದು ನಿನ್ನನ್ನು  ಸಮಾಜದಲ್ಲಿ ತಲೆಎತ್ತಿ ನಿಲ್ಲುವಂತೆ  ಮಾಡುತ್ತೇನೆ’ ಎನ್ನುವ ಪುಸ್ತಕಗಳನ್ನು  ಪ್ರೀತಿಸಿ, ಓದುವವರ ಸಂಖ್ಯೆ  ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ, ಅಂತಹ ಪುಸ್ತಕ ಓದುವ  ಹುಮ್ಮಸ್ಸು ಎಲ್ಲರಲ್ಲೂ ಮೂಡಬೇಕೆಂಬ  ಆಶಯದಿಂದ ಮಂಗಳೂ- ರಿನಲ್ಲಿ ರೂಪಶ್ರೀ ಶೆಣೈ ಅವರು  ‘ಪೇಪರ್‌ರಾಕೆಟ್’ ಎಂಬ ಹೆಸರಿನ  ಸುಮಾರು ೭೦೦ ಪುಸ್ತಕಗಳ ಮಿನಿ  ಗ್ರಂಥಾಲಯವೊAದನ್ನು ಸ್ಥಾಪಿಸಿ ಪುಸ್ತಕ  ಪ್ರೀತಿ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹೌದು, ಮಂಗಳೂರಿನ ಮಣ್ಣಗುಡ್ಡದ  ವರ್ಟಿಕ್ಸ್ ಲಾಂಜ್‌ನಲ್ಲಿ ಈ ರೀತಿಯ  ಅನುಪಮ ಕಾರ್ಯ ಆರಂಭವಾಗಿದೆ.  ವರ್ಷಗಳ ಹಿಂದೆ ಕೇವಲ  ಒಂದುಮೇಜು ಪುಸ್ತಕದೊಂದಿಗೆ  ಆರಂಭಗೊAಡಿದ್ದ ಈ ಕಾರ್ಯವು,  ೯೦ ವರ್ಷಗಳಷ್ಟು ಹಳೆಯ ಮತ್ತು  ಮಹಾತ್ಮ ಗಾಂಧೀಜಿ ಅವರು ಭೇಟಿ  ನೀಡಿದ್ದ ಸ್ಥಳಕ್ಕೆ ಬಂದಿದೆ. ಅಲ್ಲಿಯೇ  ಗ್ರಂಥಾಲಯ ರೂಪ ಗೊಂಡಿದೆ. ಪೇಪರ್‌ರಾಕೆಟ್ ಹೆಸರಿನಡಿ ಈ  ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದ್ದು,  ಕಿರಿಯರಿಂದ ಹಿರಿಯರವರೆಗೆ  ಪುಸ್ತಕ ಓದುಗ ಮಿತ್ರರು ಗ್ರಂx- Áಲಯಕ್ಕೆ ಭೇಟಿ ನೀಡುತ್ತಾರೆ.  ಪುಸ್ತಕಗಳನ್ನು ಗ್ರಂಥಾಲಯದಲ್ಲಿ  ಉಚಿತವಾಗಿ ಓದಲು ಅವಕಾಶ  ವಿದ್ದು. ಅನಿವಾರ್ಯ ಸಂದರ್ಭಗಳಲ್ಲಿ  ಮನೆ...