ವನಿತೆಯರಿಗೆ ಮಾದರಿ ‘ವನಿತಾ
ವಿನೀತ್ ಬಿ,
ಮೂಡುಬಿದಿರೆ:
ಲಿಂಗ ತಾರತಮ್ಯ ಇನ್ನೂ ಜೀವಂತ
ಇರುವ ಈ ಪ್ರಪಂಚದಲ್ಲಿ ಅದೆಷ್ಟೋ
ಮಹಿಳೆಯರು ತಾವು ಯಾವ ಪುರುಷ-
ರಿಗೂ ಕಡಿಮೆಯಲ್ಲ ಎನ್ನುವುದನ್ನು
¸ Á ಬಿ Ã v À Ä ¥ À ಡಿ ಸಿ P ೆ Æ ಂ q À Ä
ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು
v É Æ q À ಗಿ ಸಿ P É Æ ¼ À Ä ್ಳ ತಿ ್ತ g À Ä ª À Å z À Ä
ಮಹತ್ವದ ಸಾಧನೆಯೇ ಹೌದು.
ತಮ್ಮಧೈರ್ಯ, ಆತ್ಮವಿಶ್ವಾಸದಿಂದ
ಒಂದು ಹೆಜ್ಜೆ ಮುಂದಿಟ್ಟು
ಚಾಲಕರಾಗಿ ಕೆಲಸ ಮಾಡುತ್ತಿರುವ
ಅದೆಷ್ಟೋ ಮಹಿಳೆಯರು ಇದ್ದಾರೆ.
ಈ ಪೈಕಿ ಮಂಗಳೂರಿನ
ಮೊದಲ ಎಲೆಕ್ಟ್ರಾನಿಕ್ ಆಟೋರಿಕ್ಷಾ
ಚಾಲಕಿ ಅವರೇ ವನಿತಾ ಸುರೇಶ್
ಕೆ. ಅವರ ಸಾಧನೆಯೂ ಅನನ್ಯ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ
ದ್ವಿಚಕ್ರ ವಾಹನ ಚಾಲನೆ ಕಲಿತ
ವನಿತಾ ಅವರು, ತನ್ನ ಪತಿಯ
ಸಹಾಯದಿಂದ ಆಟೊ ಬಿಡುವುದನ್ನೂ
ಕಲಿತರು. ತಮ್ಮ ಪತಿಯ ಇಆಟೋರಿಕ್ಷಾವನ್ನು ಮೊದಲು
ಓಡಿಸುತ್ತಿದ್ದ ವನಿತಾ ಅವರು,
ನಂತರ ಹೊಸ ಇಆಟೊರಿಕ್ಷಾ ಖರೀದಿಸಿ
ಚಾಲಕಿಯಾಗಿ ಕೆಲಸ ಶುರು
ಮಾಡಿದರು. ಇದಕ್ಕೂ
ಮೊದಲು ಟೇಲರ್ ಆಗಿದ್ದ
ಅವರು, ತಮ್ಮ ವೃತ್ತಿಯನ್ನೂ
ಮುಂದುವರಿಸಿಕೊAಡು ಬಂದರು.
‘ಹೊಸದನ್ನು ಕಲಿಯಲು ಸಮಯ
ಸದಾ ನಮ್ಮೊಂದಿಗೆ ಇರುತ್ತದೆ. ನನಗೆ
ಹಿಂದಿ, ಕನ್ನಡ ಹಾಗೂ ಮಲಯಾಳಂ
ಭಾಷೆಗಳು ಬರುವುದರಿಂದ ಆ
ರಾಜ್ಯಗಳ ಪ್ರಯಾಣಿಕರೊಂದಿಗೆ
ಮಾತಾಡಲು ಸುಲಭವಾಗುತ್ತದೆ.
ಎಷ್ಟೋ ಊರಿನ ಸಂಪರ್ಕದ
ಮಾರ್ಗ ಸರಿಯಾಗಿತಿಳಿಯದೇ
ಇದ್ದಾಗ ಪ್ರಯಾಣಿಕರಲ್ಲಿ
ಕೇಳಿ ತಿಳಿದುಕೊಳ್ಳುತ್ತೇನೆ.
ನನ್ನ ಧೈರ್ಯ ಹಾಗೂ ಆತ್ಮವಿಶ್ವಾಸಕ್ಕೆ
ಪ್ರಯಾಣಿಕರು ಹುರಿದುಂಬಿಸುತ್ತಾರೆ.
ಇ-ಆಟೊರಿಕ್ಷಾ ಚಾಲನೆಯು
ಸಿ ಎನ್ ಜಿ ಆಟೋ-
ರಿಕ್ಷಾಗಳಿಗಿಂತ ಸುಲಭವಾಗಿದೆ. ನನಗೆ
ಸ್ಕೂಟರ್ ಓಡಿಸುವಷ್ಟು
ಸುಲಲಿತವಾಗಿದೆ’ ಎಂದು
ಹಸನ್ಮುಖರಾಗಿ ನುಡಿಯುತ್ತಾರೆ ವನಿತಾ.
ಸುಳ್ಯ ತಾಲ್ಲೂಕಿನ
ನಿಂತಿಕಲ್ಲುನಿವಾಸಿ ಸುರೇಶ್
ಅವರನ್ನು ವಿವಾಹವಾದ ವನಿತಾ,
ಬಳಿಕ ಕಾರಣಕ್ಕಾಗಿ ಮಂಗಳೂರಿನ
ನಂತೂರಿಗೆ ಬಂದು ನೆಲೆಯಾದರು.
‘ಮಂಗಳೂರು ಸುರಕ್ಷಿತ ಸ್ಥಳವಾಗಿದೆ.
ತುರ್ತಸಹಾಯ ಬೇಕಾದಲ್ಲಿ ಹತ್ತಿರದ
ಆಟೋಚಾಲಕರು ಸಹಾಯ
ಮಾಡುತ್ತಾರೆ. ಮನೆಯವರ
ಬೆಂಬಲದೊAದಿಗೆ ನನ್ನಹೆಂಡತಿಗೆ
ಅವಳ ಕನಸುಗಳನ್ನು ಪೂರೈಸಲು
ಜೀವನದಲ್ಲಿ ಮುಂದೆ ಬರಲು
ಎಂದಿಗೂ ನಾನು ಸಹಾಯ
ಮಾಡುತ್ತೇನೆ’ ಎನ್ನುತ್ತಾರೆ
ವನಿತಾ ಅವರ ಪತಿ ಸುರೇಶ್.